ಗುರುವಾರ, ಜುಲೈ 14, 2011

ನಮ್ಮ ಪಂಚಾಯತಿಯ ಬಗ್ಗೆ

ಗ್ರಾಮ ಪಂಚಾಯತು :ಸಂಪಾಜೆ
ಈ ಗ್ರಾಮವು ಸುಳ್ಯ ತಾಲೂಕಿನಿಂದ 22 ಕಿ.ಮೀ. ದೂರದಲ್ಲಿದೆ
ವಿಸ್ತೀರ್ಣ:1757.25 ಹೆಕ್ಟೇರ್
ಜನಸಂಖ್ಯೆ:5856
ವಾರ್ಡ್ ಗಳು: 5
ಪ್ರಮುಖ ಬೇಸಾಯ ಬೆಳೆಗಳು: ಅಡಿಕೆ,ತೆಂಗು,ರಬ್ಬರ್,ಕೊಕ್ಕೋ,ಗೇರುಬೀಜ
ಒಟ್ಟು ಮನೆಗಳು:1647
ಪ್ರಮುಖ ನದಿ:ಪಯಸ್ವಿನಿ
ಆಸ್ಪತ್ರೆಗಳು : 4
ಶಾಲೆಗಳು: 5 ಕನ್ನಡ ಮಾಧ್ಯಮ, 1ಆಂಗ್ಲ ಮಾಧ್ಯಮ ಶಾಲೆ
ಅಂಗನವಾಡಿ ಕೇಂದ್ರಗಳು : 7
ಅಂಚೆಕಛೇರಿ: ಸಂಪಾಜೆ,ಗೂನಡ್ಕ ಅಂಚೆ ಕಛೇರಿ
ಬ್ಯಾಂಕ್ ಗಳು :ಕೆನರಾ ಬ್ಯಾಂಕ್,ವ್ಯವಸಾಯ ಸಹಕಾರಿ ಸೇವಾ ಬ್ಯಾಂಕ್
ದೈವಸ್ಥಾನಗಳು:ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನ,ಶ್ರೀಮುತ್ತುಮಾರಿಯಮ್ಮ ದೈವಸ್ಥಾನ,
ಅಮ್ಮತಾಯಿದೈವಸ್ಥಾನ,ಮೊಗರ್ಕೆಳ ದೈವಸ್ಥಾನ
ಚರ್ಚ್ ಗಳು:ಸಂತ ಪ್ರಾನ್ಸಿಸ್ ಕ್ಷೇವಿಯರ್ ಚರ್ಚ್, ಮದರ್ ತೆರೆಸಾ ಹೋಲಿ ಟ್ರಿನಿಟಿ ಚರ್ಚ್
ಮಸೀದಿಗಳು: ಕಲ್ಲುಗುಂಡಿ ಜುಮ್ಹಾ ಮಸೀದಿ,ಗೂನಡ್ಕಜುಮ್ಹಾ ಮಸೀದಿ, ಪೇರಡ್ಕಜುಮ್ಹಾ ಮಸೀದಿ

ವಸತಿ ಸೌಕರ್ಯ:ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನ ಎಲ್ಲಾ ಸೌಕರ್ಯಗಳು ಹೊಂದಿದೆ ದೂರವಾಣಿ: 08257-266140

ಮತ್ತದೇ ಬೇಸರ....!!

ಮತ್ತದೇ ಬೇಸರ, ಅದೆ ಸಂಜೆ ಅದೆ ಏಕಾಂತ‌
ನಿನ್ನ ಜೊತೆ ಇಲ್ಲದೆ, ಮಾತಿಲ್ಲದೆ ಮನ ವಿಭ್ರಾಂತ..

ಕಣ್ಣನೆ ದಣಿಸುವ ಈ ಪಡುವಣ ಬಾನ್ಬಣ್ಣಗಳು
ಮಣ್ಣನೆ ಹೊನ್ನಿನ ಹಣ್ಣಾಗಿಸುವೀ ಕಿರಣಗಳು
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗಗಾನ‌
ಚಿನ್ನ ನೀನಿಲ್ಲದೆ ಬಿಮ್ಮೆನ್ನುತಿದೆ ರಮ್ಯೋದ್ಯಾನ....

ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ‌
ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ‌
ಮುತ್ತಿದಾಲಸ್ಯದ ಬಿಗಿಮೌನವ ಹೊಡೆದೋಡಿಸು ಬಾ
ಮತ್ತೆ ಆ ಸಮತೆಯ ಹಿರಿಬೇಲಿಯ ಸರಿ ನಿಲಿಸು ಬಾ....

-ಕೆ. ಎಸ್. ನಿಸ್ಸಾರ್ ಅಹ್ಮದ್

ಗರಿ - ಕನಸಿನೊಳಗೊಂದು ಕಣಸು

ಕನಸಿನೊಳಗೊಂದು ಕಣಸು
(ತಾಯಿ-ಮಕ್ಕಳ ಸಂವಾದ)
(ಗರಿ - ಕವನ ಸಂಗ್ರಹ)

"ಯಾರು ನಿಂದವರಲ್ಲಿ ತಾಯಿ" ಎಂದೆ
""ಯಾರು ಕೇಳುವರೆನಗೆ, ಯಾಕೆ ತಂದೆ?"

"ಬೇಸರದ ದನಿಯೇಕೆ ಹೆಸರ ಹೇಳಲ್ಲ"
"ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ"

"ನೀನಾರ ಮನೆಯಳೊ ಮುತ್ತೈದೆ ಹೇಳು"
"ನಾನಾರ ಮನೆಯವಳೊ ಬಯಲನ್ನೆ ಕೇಳು"

ಆಪ್ತರಿಲ್ಲವೆ ನಿನಗೆ ಇಷ್ಟರಲ್ಲೇ?"
ಗುಪ್ತರಾದರೊ ಏನೊ ಇಷ್ಟರಲ್ಲೇ"

"ಇರುವರೇ ಇದ್ದರೇ ಮಕ್ಕಳೆಂಬವರು?"
"ಇರುವರೆಂದರು ಕೂಡ ಯಾರು ನಂಬುವರು?"

"ಮನೆಯಿಲ್ಲವೇ ಇರಲು ಪರದೇಶಿಯೇನು?"
"ಮನೆಯೆ ಮುನಿದೆದ್ದಿರಲು ಯಾ ದೇಶವೇನು?"

"ನಿನ್ನ ಮಾತಿನಲಿಹುದು ಒಡಪಿನಂದ"
"ನನ್ನ ಹತ್ತಿರದೊಂದೆ ಉಳಿದಿಹುದು ಕಂದ"

"ರಾಜಮುಖಿ ನಿನ್ನಲ್ಲಿ ರಾಜಕಳೆಯಿಹುದು!"
"ಸಾಜವಾದರು ಪಕ್ಷವಿದಿ ವ್ದ್ಯವಹುದು!"

"ಯಾವುದಾದರು ನಾಡದೇವಿಯೇ ನೀನು?"
"ಭಾವುಕರ ಕಂಗಳಿಗೆ ದೇವಿಯೇ ನಾನು"

"ಈಗ ಬಂದಿಹುದೇಕೆ ಏನು ಬೆಸನ?"
"ಯೋಗವಿಲ್ಲದೆ ತಿಳಿಯದೆನ್ನ ವ್ಯಸನ"

"ಹಾದಿ ಯಾವುದು ಹೇಳು, ಯಾವ ಯೋಗ?"
"ಆದಿ ಅಂತವು ಇಲ್ಲದಂಥ ತ್ಯಾಗ"

"ಬೇಡ ಬಂದಿಹೆಯೇನು ಏನಾದರೊಂದು?"
"ಬೇಡಿದರೆ ಬೇಡಿದುದ ಕೊಡುವೆಯಾ ಇಂದು?"

"ಅಹುದು ಕೊಡುವೆನು ಎಂದು ನಾನೆನ್ನಬಹುದೇ?"
ಬಹುದು-ಗಿಹುದಿನ ಶಂಕಿ ವೀರನಹುದೇ?"

"ಹಿಂಜರಿವ ಅಂಜಿಕೆಯು ಹಿಡಿದಿಹುದು ಕೈಯ"
"ಮುಂಜರಿವ ಹುರುಪಿನೊಡ ಮುಂದೆ ಬಾರಯ್ಯ!"

"ಇಲ್ಲೆನ್ನಲಾರೆ ನಾನಹುದೆನ್ನಲಮ್ಮೆ"
ಬಲ್ಲವರು ದೈವವನು ಪರಿಕಿಸುವರೊಮ್ಮೆ!"

"ಚಂಡಿ ಚಾಮುಂಡಿ ಕೇಳ್ ಬೇಕಾದುದೇನು?"
"ಗಂಡುಸಾದರೆ ನಿನ್ನ ಬಲಿ ಕೊಡೂವೆಯೇನು?"

ಮನವು ನಡುಗಿತು ತನುವು ನವಿರಿಗೊಳಗಾಯ್ತು
ನೆನವು ನುಗ್ಗಿತು -- ಹೊರಗೆ ಕಂಡೆ -- ಬೆಳಗಾಯ್ತು

ಚಂದ್ರ ಚಕೋರಿ (2003) - ಬೆಳ್ಳಂಬೆಳಗೆ ದಾರಿ ಬಿಡು

ಸಾಹಿತ್ಯ: ಎಸ್. ನಾರಾಯಣ್
ಸಂಗೀತ: ಎಸ್.ಎ. ರಾಜಕುಮಾರ್
ಗಾಯನ: ಎಸ್.ಎ. ರಾಜಕುಮಾರ್

ತಂದಾನ ತಂದಾನ ತಾನ ನ ನ
ತಂದಾನ ತಂದಾನ ತಾನ ನ ನ

ಏ! ಬೆಳ್ಳಂಬೆಳಗೆ ದಾರಿ ಬಿಡೂ
ಏ! ಬೀಸೋ ಗಾಳಿಯೆ ದಾರಿ ಬಿಡೂ
ಏ! ಬೆಳ್ಳಂಬೆಳಗೆ ದಾರಿ ಬಿಡೂ
ಬೀಸೋ ಗಾಳಿಯೆ ದಾರಿ ಬಿಡು
ಗಿಡ ಮರದ ತುಂಬ ಅವಿತವಿತು ಕುಳಿತ ಹಾಲಕ್ಕಿ ದಾರಿಬಿಡು

ಹಸಿರಸಿರ ರಾಶಿ ಭೂರಮೆಗೆ ಹಾಸಿ ಓ ಸೊಬಗೇ ದಾರಿ ಬಿಡು
ನಮ್ಮೂರಿನ ಬೆಳಕು ನಿಮ್ಮ ಊರಿಗೆ ಬರಲು ದಾರಿ ಬಿಡೂ
ಓ ಹೋ...!
ಬೆಳ್ಳಂಬೆಳಗೆ ದಾರಿ ಬಿಡೂ
ಏ! ಬೀಸೋ ಗಾಳಿಯೆ ದಾರಿ ಬಿಡೂ

ಹೊತ್ತು ಮುಳುಗಿದರು, ಕತ್ತಲೇರಿದರು ಮಿಂಚುತಾಳೆ ಇವಳೂ
ಅದು ಯಾಕೆ ಸ್ವಲ್ಪ ಹೇಳು
ಬಣ್ಣ ಹಚ್ಚಲಿಲ್ಲ, ಚಿನ್ನ ತೊಡಿಸಲಿಲ್ಲ, ಹೊಳೆಯುತಾಳೆ ಇವಳೂ
ಇದು ಯಾಕೆ ಬೇಕು ಹೇಳು

ಇವಳಾಸೆಗೆ ರೆಕ್ಕೆ ಬಂತು ಕಣ್ಣ ಭಾಷೆಗೆ ಮಾತು ಬಂತೂ ||೨||
ಇದೇನಿದು ಹೊಸದಾಗೈತೆ
ಎಲ್ಲೂ ನಾವು ಕೇಳದ ಮಾತೆ
ಯೌವನದ ಟಪಾಲು ಬಂದು ಇವಳ ಎದೆಗೆ ಬಡಿದೈತೆ
ನಾಚಿಕೆಯ ರುಮಾಲು ಬಂದು ಇವಳ ತಡಿತಾ ಕುಂತೈತೆ

ಏ! ಬೆಳ್ಳಂಬೆಳಗೆ ದಾರಿ ಬಿಡೂ
ಬೀಸೋ ಗಾಳಿಯೆ ದಾರಿ ಬಿಡೂ

ತೆಂಗು ಮಾವುಗಳು, ಬಾಳೆದಿಂಡುಗಳು ಕಾಯುತೈತೆ ಇವಳಾ
ಆ ಕಾಯುತೈತೆ ಇವಳ
ಮಲ್ಲೆ ಕುಂಕುಮವು ಗಂಧ ಅರಿಶಿನವು ಕೇಳುತೈತೆ ಇವಳಾ
ಅಯ್ಯೋ ಕೇಳುತೈತೆ ಇವಳಾ
ಒಂದು ರೇಷೀಮೆ ಸೀರೆ ಇದೆ
ಇವಳಂದಾನಾ ಕಾಯೂತಿದೇ
ಒಂದು ಒಡ್ಯಾನ ತೂಗೂತೈತೆ
ಈ ಬಂಗಾರಿ ಸಿಂಗಾರಕ್ಕೆ
ಅದಕ್ಕಿಂತ ಇನ್ನೊಂದೈತೆ
ಬೇಗ ಹೇಳು ಮುಂದೇನೈತೆ
ಗಂಡು ಒಬ್ಬ ಅಲ್ಲವ್ನೆ ಈ ಗೊಂಬೇನ ನೋಡೋಕೇ
ತಿಂಗ್ಳಿಂದ ಕಾದವ್ನೆ ಈ ನಗುವಾ ಬೇಡೋಕೇ

ಬೆಳ್ಳಂಬೆಳಗೆ ದಾರಿ ಬಿಡು
ಹೇ! ಬೀಸೋ ಗಾಳಿಯೆ ದಾರಿ ಬಿಡು
ಗಿಡ ಮರದ ತುಂಬ ಅವಿತವಿತು ಕುಳಿತ ಹಾಲಕ್ಕಿ ದಾರಿಬಿಡು
ಹಸಿರಸಿರ ರಾಶಿ ಭೂರಮೆಗೆ ಹಾಸಿ ಓ ಸೊಬಗೇ ದಾರಿ ಬಿಡು
ನಮ್ಮೂರಿನ ಬೆಳಕು ನಿಮ್ಮ ಊರಿಗೆ ಬರಲು ದಾರಿ ಬಿಡು
ಓ ಹೋ...!

ಏ ಬೆಳ್ಳಂಬೆಳಗೆ ದಾರಿ ಬಿಡೂ....
ದಾರಿ ಬಿಡು ದಾರಿ ಬಿಡು
ಹೇ! ಬೀಸೋ ಗಾಳಿಯೆ ದಾರಿ ಬಿಡೂ...
ದಾರಿ ಬಿಡು ದಾರಿ ಬಿಡು

ಓಹ್.........

ಅಕೋ ಶ್ಯಾಮ ಅವಳೇ ರಾಧೆ

ಅಕೋ ಶ್ಯಾಮ ಅವಳೇ ರಾಧೆ
ನಲಿಯುತಿಹರು ಕಾಣಿರೇ |
ನಾವೆ ರಾಧೆ ಅವನೇ ಶ್ಶಾಮ
ಬೇರೆ ಬಗೆಯ ಮಾಣಿರೇ ||

ಕಲರವದೊಳು ಯಮುನೆ ಹರಿಯೆ
ಸೋಬಾನೆಯ ತರುಗಳುಲಿಯೆ
ತೆನೆತೆನೆಯೊಳು ಹರಸಿದಂತೆ
ಬಾನಿಂ ಜೊನ್ನ ಭೂಮಿಗಿಳಿಯೆ ||

ಕಂಪ ಬಿಡುವ ದಳಗಳಂತೆ
ಸುತ್ತಲರಳಿ ಕೊಳ್ಳಿರೇ|
ಒಲುಮೆಗಿಡುವ ಪ್ರಭಾವಳಿಯ
ತೆರದಿ ಬಳಸಿ ನಿಲ್ಲಿರೇ ||

ಕಡಗ ಕಂಕಣ ಕಿನಿಕಿನಿಯೆನೆ
ಅಡಿಗೆಯಿರುಲೆ ಝಣರೆನೆ |
ಎದೆ ನುಡಿತಕೆ ಚುಕ್ಕಿ ಮಿಡಿಯೆ
ಕೊಳಲನೂದಿ ಕುಣಿವನೆ ||

ನಮ್ಮ ಮನವ ಕೋದು
ಮಾಲೆ ಗೈದು ಮುಡಿಯುತಿಹನೆನೆ |
ಮಾಧವನೂದುವ ಮಧುರ ಗಾನ
ಎದೆಯ ಹಾಯ್ವುದಾಯೆನೆ ||

ನೋಡಿ ತಣಿಯೆ ಹಾಡಿ ತಣೆಯೆ
ಲೇಸನಾಡಿ ತಣಿಯೆನೆ |
ಕುಣಿದು ತಣಿಯೆ ದಣಿದು ತಣಿಯೆ
ದಣಿವಿಲ್ಲದೆ ನಲಿವೆನೆ ||


- ಪು.ತಿ.ನ.

ಗುರುವಾರ, ಜನವರಿ 13, 2011